ಶ್ರೀಯುತ ನಾಗೇಂದ್ರರ ಪರಿಸರ ಕೃಷಿ
ಇವರು ಶ್ರೀಯುತ ನಾಗೇಂದ್ರ. ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳದವರು. ಈ ಗ್ರಾಮದ ಅನೇಕರು ತಮ್ಮ ಹೊಲ ಗದ್ದೆ ಗಳನ್ನು ಮಾರಿ ತಾರಸಿ ಮನೆಗಳನ್ನು ಕಟ್ಟಸಿಕೊಂಡು ಬೇರೆ ಬೇರೆ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿರುವ ಈ ಕಾಲದಲ್ಲೂ ಇವರು ದೊಡ್ಜ ಕುಟುಂಬದೊಂದಿಗೆ ಹಳೆ ಮನೆಯಲ್ಲಿಯೇ ವಾಸಿಸುತ್ತಾ, ಕೃಷಿಯನ್ನೇ ಜೀವನಾಧಾರವಾಗಿ ನಂಬಿಕೊಂಡಿರುವವರು.
ಕಳೆದ 20 ವರ್ಷಗಳಿಂದ ತಮ್ಮ 10 ಎಕರೆ ನೀರಾವರಿ ಭೂಮಿಯಲ್ಲಿ ಕೆಮಿಕಲ್ ಪಾರ್ಮಿಂಗ್ ಹಾಗೂ ಏಕ ಬೆಳೆ ಪದ್ದತಿಯಲ್ಲಿ ತರಕಾರಿ ಬೆಳೆದೂ ಬೆಳೆದೂ ಕೈ ಸುಟ್ಟು ಕೊಂಡು ಹತಾಷರಾಗಿದ್ದವರು
ಇವರು ಬೆಳವಲ ಫೌಂಡೇಷನ್ ನ ಮಾರ್ಗದರ್ಶನ ಪಡೆದು ಕಳೆದ ವರ್ಷದಿಂದ ಪರಿಸರ ಕೃಷಿಯತ್ತ ಒಲವು ತೋರಿಸಿ ಬಹು ಬೆಳೆ ಪದ್ದತಿಗೆ ಬದಲಾಗುತ್ತಿದ್ದಾರೆ!
ಒಂದು ವರ್ಷದಲ್ಲಿಯೇ 50 ಭಾಗ ರಸಾಯಿನಿಕ ಗಳನ್ನು ಕಡಿಮೆ ಮಾಡಿ, ಬಯೋಡೈಜಷ್ಟರ್, ಬೇವಿನ ಬೀಜದಕಷಾಯ ಇತ್ಯಾದಿಗಳನ್ನು ತಯಾರಿಸಿಕೊಂಡು ಉಪಯೋಗಿಸುತ್ತಿದ್ದಾರೆ!
ಮೂಸುಂಬೆ, ನಿಂಬೆ, ಸೀಬೆ, ಬಾಳೆ, ಪಪಾಯ ಇತ್ಯಾದಿ ಬಹುವಾರ್ಷಿಕ ಬೆಳೆಗಳನ್ನು ನೆಟ್ಟು ಅವುಗಳ ಮದ್ಯದಲ್ಲಿ ಅವರು ಹಿಂದೆ ಬೆಳೆಯುತ್ತಿದ್ದ ತರಕಾರಿಗಳನ್ನೂ ಬೆಳೆಯುತ್ತಿದ್ದಾರೆ.
ಇವರ ಮತ್ತೊಂದು 10 ಎಕರೆ ಹೊಲದಲ್ಲಿ ಗೇರು, ಶ್ರೀಗಂಧ, ರಕ್ತ ಚಂದನ, ಮಾವು ಇತ್ಯಾದಿಗಳನ್ನೊಳಗೊಂಡಮಿಶ್ರ ಕೃಷಿ ಮಾಡಲು ಸಜ್ಜಾಗುತ್ತಿದ್ದಾರೆ! ಮುಖದಲ್ಲಿ ನಗೆ ಮೂಡುತ್ತಿದೆ!!
ಇನ್ನೆರಡು ವರ್ಷದಲ್ಲಿ ಇವರು ಸಂಪೂರ್ಣ ಪರಿಸರ ಕೃಷಿಕರಾಗಿ ಯಶಸ್ವಿ ಯಾಗುವ ಎಲ್ಲಾ ಭರವಸೆ ತೋರಿಸುತ್ತಿದ್ದಾರೆ!
ಬೆಳವಲ ಫೌಂಡೇಷನ್ ಇವರನ್ನು ಅಭಿನಂದಿಸುತ್ತಿದೆ!!
ಡಾ. ರಾಮಕೃಷ್ಣಪ್ಪ